ದೇಹದಲ್ಲಿ ವೀರ್ಯ ಶೇಖರಿಸಿ ಬೇಕೆಂದಾಗ ಗರ್ಭ ಧರಿಸುವುದಕ್ಕೆ ಸಾಧ್ಯವೇ..?

Share This

ಇತ್ತೀಚೆಗೆ ಎಷ್ಟೋ ಮಹಿಳೆಯರಿಗೆ ಬೇಗ ಗರ್ಭಿಣಿಯರಾಗೋದಕ್ಕೆ ಇಷ್ಟವೇ ಇರೋದಿಲ್ಲ. ಗರ್ಭಿಣಿಯಾದರೆ ಸೌಂದರ್ಯ ಹಾಳಾಗುತ್ತೆ ಎಂದು ತಾಯಿಯಾಗುವ ಅವಕಾಶವನ್ನೇ ಮುಂದಕ್ಕೆ ಹಾಕುತ್ತಿರುತ್ತಾರೆ. ಹೀಗೆ ಗರ್ಭ ಧರಿಸುವುದನ್ನು ಮುಂದಕ್ಕೆ ಹಾಕಬೇಕೆಂದರೆ ಗರ್ಭ ನಿರೋಧಕ ಸಾಧನಗಳನ್ನು ಬಳಸಲೇಬೇಕು. ಯಾವುದೇ ಗರ್ಭ ನಿರೋಧಕಗಳನ್ನು ಬಳಸದೇ ಗರ್ಭ ಧರಿಸುವುದನ್ನು ನೈಸರ್ಗಿಕವಾಗಿ ಮುಂದಕ್ಕೆ ಹಾಕುವುದಕ್ಕೆ ಮಹಿಳೆಯರಿಗೆ ಸಾಧ್ಯವೇ ಇಲ್ಲ. ಆದರೆ ಕೆಲ ಪ್ರಾಣಿಗಳಲ್ಲಿ ಇದಕ್ಕೆ ಅವಕಾಶವಿದೆ. ತನಗೆ ಬೇಕಾದಾಗ ಗರ್ಭ ಧರಿಸುವ ಹಲವು ಪ್ರಾಣಿಗಳಿಗಿದೆ.


ಸಾಲ್ಮನ್‌ ಎಂಬುದು ಮೀನಿನ ಒಂದು ಜಾತಿ. ಈ ಸಾಲ್ಮನ್‌ ಗಳಿಗೆ ತಮಗೆ ಇಷ್ಟ ಬಂದಾಗ ಗರ್ಭ ಧರಿಸುವ ಶಕ್ತಿ ಇದೆ. ಹೆಣ್ಣು ಸಾಲ್ಮನ್‌ ಗಳಿಗೆ ತನ್ನ ಅಂಡಾಣುಗಳನ್ನು ನಿಯಂತ್ರಿಸುವ ಶಕ್ತಿ ಇದೆ. ಅಷ್ಟೇ ಅಲ್ಲ, ವೀರ್ಯಾಣುಗಳು ಅಂಡಾಣುಗಳೊಂದಿಗೆ ಸೇರುವ ಪ್ರಕ್ರಿಯೆಯನ್ನೇ ನಿಯಂತ್ರಿಸುವ ತಾಕತ್ತಿದೆ. ಮಿಲನ ಪ್ರಕ್ರಿಯೆಯಲ್ಲಿ ಗಂಡು ಸಾಲ್ಮನ್‌ ಗಳು ಬಿಡುಗಡೆ ಮಾಡುವ ವೀರ್ಯಾಣುಗಳನ್ನು ಹೆಣ್ಣು ಸಾಲ್ಮನ್‌ ಗಳು ತಮಗೆ ಬೇಕಾದಂತೆ ನಿಯಂತ್ರಿಸಬಲ್ಲವು. ಮಿಲನದ ವೇಳೆಯಲ್ಲೇ ಅಂಡಾಣುಗಳ ಜೊತೆಗೆ ವೀರ್ಯಾಣುಗಳನ್ನು ಸೇರಿಸಲು ಅನುವು ಮಾಡಿಕೊಳ್ಳಬಲ್ಲವು. ಬೇಡ ಎಂದರೆ ವೀರ್ಯಾಣುಗಳನ್ನು ಅಂಡಾಣುಗಳ ಜೊತೆ ಸೇರದಂತೆ ನಿಯಂತ್ರಿಸಿ ತನ್ನ ಅಂಡಾಶಯದಲ್ಲೇ ಪ್ರತ್ಯೇಕವಾಗಿ ಇರಿಸಬಲ್ಲವು. ಗರ್ಭ ಧರಿಸಬೇಕು ಎಂದೆನಿಸಿದಾಗ ಪ್ರತ್ಯೇಕವಾಗಿರುವ ವೀರ್ಯಾಣುಗಳನ್ನು ಅಂಡಾಣುಗಳೊಂದಿಗೆ ಸೇರಿಸಬಲ್ಲವು.


ಕೆಲ ಜಾತಿಯ ಹೆಣ್ಣು ಇಲಿಗಳು, ಕೆಲ ಕಾಡುಕೋಳಿಗಳು ಕೂಡಾ ತನಗೆ ಇಷ್ಟವಾದ ಗಂಡಿನ ವೀರ್ಯಾಣುಗಳನ್ನು ಮಾತ್ರ ಗರ್ಭ ಧರಿಸಲು ಬಳಸಿಕೊಳ್ಳುತ್ತವೆ. ಇಷ್ಟವಿಲ್ಲದ ಗಂಡುಗಳ ಜೊತೆಗೆ ಮಿಲನ ಕ್ರಿಯೆ ನಡೆಸಿದರೂ ಗರ್ಭ ಧರಿಸದಂತೆ ತಡೆಯುವ ಶಕ್ತಿ ಅವಕ್ಕಿದೆ. ಡ್ರೋಸೋಫಿಲ್‌ ಜಾತಿಗೆ ಸೇರಿದ ನೊಣಗಳಿಗೆ ವೀರ್ಯವನ್ನು ಶೇಖರಿಸಿಟ್ಟುಕೊಳ್ಳಲು ಒಂದು ಅವಯವವೇ ಇದೆ. ಹಾಗೆ ವೀರ್ಯವನ್ನು ಒಂದು ಕಡೆ ಶೇಖರಿಸಿಟ್ಟುಕೊಂಡು, ತನಗೆ ಬೇಕೆಂದಾಗ ಅದನ್ನು ಬಳಸಿಕೊಂಡು ಗರ್ಭ ಧರಿಸುತ್ತಿರುತ್ತವೆ.


ಬಾತುಕೋಳಿಗಳಲ್ಲೂ ಇದೇ ರೀತಿ ಗರ್ಭ ಧರಿಸುವುದನ್ನು ನಿರ್ಧರಿಸುವ ಶಕ್ತಿ ಹೆಣ್ಣು ಕೋಳಿಗಳಿರುತ್ತದೆ. ಆದರೆ ಮನುಷ್ಯರಲ್ಲಿ ಇಂತಹ ನೈಸರ್ಗಿಕ ಶಕ್ತಿ ಇಲ್ಲದಿರುವುದರಿಂದ ಗರ್ಭ ನಿರೋಧಕ ಸಾಧನಗಳನ್ನು ಬಳಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಅಬಾರ್ಷನ್‌ ಮಾಡಿಸಿಕೊಳ್ಳಬೇಕಾಗುತ್ತದೆ. ಭಾರತ ಸೇರಿ ಬಹುತೇಕ ದೇಶಗಳಲ್ಲಿ ಅಬಾರ್ಷನ್‌ ಗೆ ಅಕಾಶವಿಲ್ಲ.

Leave a Reply

Your email address will not be published. Required fields are marked *