ಡೈಮಂಡ್‌ ಸಿಟಿಯಲ್ಲಿ ʻಗೋಲ್ಡನ್‌ ಸ್ವೀಟ್‌ʼ; ಕೆಜಿಗೆ 9 ಸಾವಿರ ರೂಪಾಯಿ..!

Share This

ಬಂಗಾರದಿಂದ ಆಭರಣಗಳನ್ನು ತಯಾರಿಸಿ ಮೈಮೇಲೆ ಧರಿಸಿಕೊಳ್ಳುವುದು ಎಲ್ಲರಿಗೂ ಗೊತ್ತು. ಆದರೆ ಬಂಗಾರವನ್ನು ಆಹಾರವಾಗಿ ತಿನ್ನುತ್ತಾರೆ ಅಂದರೆ ನಂಬೋದು ಬಲು ಕಷ್ಟ. ಆದರೆ ಇದು ಸತ್ಯ ಕೂಡಾ. ಗುಜರಾತ್‌ ನ ಸೂರತ್‌ ನಗರದಲ್ಲಿ ಗೋಲ್ಡನ್‌ ಸ್ವೀಟ್‌ ಬಹಳ ಪ್ರಸಿದ್ಧಿ ಪಡೆದಿದೆ. ಈ ಸ್ವೀಟ್‌ ಗೆ ಪರಿಶುದ್ಧ ಚಿನ್ನದ ಲೇಪನ ಮಾಡ್ತಾರಂತೆ ಅನ್ನೋದು ಅಚ್ಚರಿ ಹಾಗೂ ಕುತೂಹಲದ ಸಂಗತಿ. ಈ ಸ್ವೀಟ್‌ ಗೆ ಚಿನ್ನದ ಲೇಪನ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ಇದು ಒಂದು ಕೆಜಿಗೆ 9 ಸಾವಿರ ರೂಪಾಯಿ..!


ರೋಹನ್‌ ಎಂಬುವವರು ಈ ಸ್ವೀಟ್‌ ಅಂಗಡಿ ನಡೆಸುತ್ತಾರೆ. ಹಲವು ದಶಕಗಳಿಂದ ಈ ವ್ಯವಹಾರ ನಡೆಸುತ್ತಿರುವ ರೋಹನ್‌, ಏನಾದರೂ ವಿಶೇಷವಾದದ್ದನ್ನು ನೀಡಬೇಕೆಂದು ಸದಾ ಯೋಚಿಸುತ್ತಿದ್ದಾರೆ. ಅವರ ಅಂಗಡಿ ಶುರುವಾಗಿ 25 ವರ್ಷ ಆದ ಸಂದರ್ಭದಲ್ಲಿ ಗ್ರಾಹಕರಿಗೆ ಹೊಸ ಸ್ವೀಟ್‌ ಪರಿಚಯಿಸಬೇಕು ಎಂಬ ಯೋಚನೆ ಬರುತ್ತದೆ. ಅದೇ ಗೋಲ್ಡನ್‌ ಸ್ವೀಟ್‌ ಆಗಿ ಮಾರುಕಟ್ಟೆಗೆ ಬರುತ್ತದೆ.
ಅಂದಹಾಗೆ ಈ ಸ್ವೀಟ್‌ ಗೆ ಬಳಸುವ ಕೇಸರಿಯನ್ನು ಸ್ಪೈನ್‌ ನಿಂದ ಇಂಪೋರ್ಟ್‌ ಮಾಡಿಕೊಳ್ಳುತ್ತಾರಂತೆ. ಇದಕ್ಕಾಗಿ ಉತ್ಕೃಷ್ಟವಾದ ಗೋಡಂಬಿ ಬಳಸುತ್ತಾರೆ. ಇದರ ಜೊತೆಗೆ ಶುದ್ಧ ಚಿನ್ನದ ಲೇಪನ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಈ ಸ್ವೀಟ್‌ ಬೆಲೆ ಕೆಜಿಗೆ 9 ಸಾವಿರ ರೂಪಾಯಿ..! ಆದರೂ ಇದಕ್ಕೆ ಭಾರೀ ಬೇಡಿಕೆ ಇದೆ. ರಾಖಿ ಹಬ್ಬ, ಕೃಷ್ಣಾಷ್ಟಮಿ ವೇಳೆಯಲ್ಲಿ ಈ ಗೋಲ್ಡನ್‌ ಸ್ವೀಟ್‌ ಗೆ ಎಲ್ಲಿಲ್ಲದ ಬೇಡಿಕೆ.


ಅಂಗಡಿ ಮಾಲೀಕ ರೋಹನ್‌ ಹೇಳುವ ಪ್ರಕಾರ ಆಹಾರ ಪದಾರ್ಥಗಳಲ್ಲಿ ಚಿನ್ನವನ್ನು ಬಳಸುವುದು ತುಂಬಾನೆ ಕಡಿಮೆ. ಯಾಕೆಂದರೆ ಅದು ತುಂಬಾ ದುಬಾರಿ. ಅದರಲ್ಲೂ ಆಭರಣಕ್ಕೆ ಬಳಸುವ ಚಿನ್ನದ ಶುದ್ಧತೆಗಿಂತ ಹಲವು ಪಟ್ಟು ಶುದ್ಧವಾಗಿದ್ದರೆ ಮಾತ್ರ ತಿನ್ನಲು ಬಳಸಬಹುದು. ಸ್ವೀಟ್‌ ಮೇಲೆ ಲೇಪನವಾಗುವ ಚಿನ್ನ ಹೊಟ್ಟೆ ಸೇರುವುದರಿಂದ ಯಾವುದೇ ಅನಾಹುತವಾಗಬಾರದು. ಹೀಗಾಗಿ, ಅತ್ಯಂತ ಶುದ್ಧ ಚಿನ್ನವನ್ನೇ ಇದಕ್ಕೆ ಬಳಸುತ್ತೇನೆ. ಇದರಿಂದಾಗಿ ಗೋಲ್ಡನ್‌ ಸ್ವೀಟ್‌ ತುಂಬಾ ದುಬಾರಿಯಾಗಿದೆ. ಮೊದಲಿಗೆ ಇಷ್ಟು ಹಣ ಕೊಟ್ಟು ಯಾರು ಖರೀದಿಸುತ್ತಾರೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ಈಗ ಗೋಲ್ಡನ್‌ ಸ್ವೀಟ್‌ ಗಾಗಿ ಜನ ಮೊದಲೇ ಬುಕ್‌ ಮಾಡುತ್ತಿದ್ದಾರೆ ಎಂದು ರೋಹನ್‌ ಹೇಳುತ್ತಾರೆ.
ಡೈಮಂಡ್‌ ಹಬ್‌ ಆಗಿ ಸೂರತ್‌ ದೇಶದೆಲ್ಲೆಡೆ ಪ್ರಸಿದ್ಧಿಯಾಗಿದೆ. ಇಂತಹ ಸಿಟಿಯಲ್ಲಿ ಸ್ವೀಟ್‌ ಗೂ ಹೆಚ್ಚಿನ ಮಹತ್ವವಿದೆ. ಇಲ್ಲಿನ ಜನ ಸಿಹಿ ಪ್ರಿಯರು. ಉತ್ತಮ ರುಚಿ ಇದೆ ಎಂದರೆ ಎಷ್ಟು ಹಣ ಕೊಟ್ಟು ಬೇಕಾದರೂ ಖರೀದಿಸುತ್ತಾರೆ. ಇದಕ್ಕೆ ಸಾಕ್ಷಿ 9 ಸಾವಿ ರೂಪಾಯಿ ಬೆಲೆಯ ಈ ಗೋಲ್ಡನ್‌ ಸ್ವೀಟ್‌..!

Leave a Reply

Your email address will not be published. Required fields are marked *