ಹೆಸರಿನಲ್ಲೇ ಇದೆ ʻವಿನಯʼ.. ಬಡವರಿಗೆ ಇವರದ್ದೇ ಅಭಯ..

Share This

ಜಿಎಚ್‌.. ಇದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚಿರಪರಿಚಿತ ಹೆಸರು.. ಆರ್‌.ಎಲ್‌.ಜಾಲಪ್ಪ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾಗ ಈ ಹೆಸರಿಗೆ ಆನೆಬಲ ಇತ್ತು.. ಕೋಲಾರ, ಚಿಕ್ಕಬಳ್ಳಾಪುರದ ಜನ ಏನೇ ಕೆಲಸಗಳಾಗಬೇಕಾದರೂ, ಏನೇ ಕಷ್ಟಗಳಿದ್ದರೂ ಇವರ ಮನೆ ಬಾಗಿಲನ್ನೇ ಬಡಿಯುತ್ತಿದ್ದದ್ದು.. ಅದು ಈಗಲೂ ಮುಂದುವರೆದಿದೆ ಕೂಡಾ.. ಸಾಲದೆಂಬಂತೆ ಈಗ ಜನರ ಕಷ್ಟಗಳಿಗೆ ಹೆಗಲಾಗಲು ಇವರು ಜನರ ಹತ್ತಿರಕ್ಕೇ ಹೋಗುತ್ತಿದ್ದಾರೆ. ಬಡವರ ಕಣ್ಣೀರನ್ನು ಒರೆಸುತ್ತಿದ್ದಾರೆ.. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ದೀನದಲಿತರು, ಬಡವರು, ಕಾರ್ಮಿಕರಿಗೆ ಬದುಕು ಕಟ್ಟಿಕೊಳ್ಳಲು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಬಡವರಿಗೆ ಚಿಕಿತ್ಸೆ ಪಡೆದುಕೊಳ್ಳಲು ನೆರವಾಗುತ್ತಿದ್ದಾರೆ..

 
ಹೌದು, ನಾವು ಹೇಳ್ತಾ ಇರೋದು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಕಾಂಗ್ರೆಸ್‌ ನಾಯಕ ಜಿ.ಎಚ್‌.ನಾಗರಾಜ್‌ ಬಗ್ಗೆ. ಜಾತಿಯಲ್ಲಿ ಹಿಂದುಳಿದ ಜನಾಂಗಕ್ಕೆ ಸೇರಿದವರು. ಇವರ ಜಾತಿಯ ಜನರನ್ನು ಲೆಕ್ಕ ಹಾಕಿದರೆ ಬೆರಳೆಣಿಕೆ ಅಷ್ಟೇ. ಆದರೆ ಜಿಎಚ್‌ ಎಂಬ ಹೆಸರು ಜಾತಿಗೆ ಮೀರಿದ್ದು. ಹೀಗಾಗಿಯೇ ಎಲ್ಲಾ ಜಾತಿ, ವರ್ಗದವರೂ ಇವರನ್ನು ಇಷ್ಟಪಡುತ್ತಾರೆ. ಇವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ. ಆರ್‌.ಎಲ್‌.ಜಾಲಪ್ಪ ಅವರು ಸಂಸದರಾಗಿದ್ದ ಸಮಯದಿಂದಲೂ ಜಿ.ಎಚ್‌.ನಾಗರಾಜ್‌ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಭಾವಿ ಕಾಂಗ್ರೆಸ್‌ ನಾಯಕರಾಗಿ ಬೆಳೆದುಬಂದಿದ್ದಾರೆ. ಜನರ ಕಷ್ಟಸುಖಗಳನ್ನು ಕೇಳುತ್ತಾ ಬಂದಿದ್ದಾರೆ. ಜನರೊಂದಿಗೆ ಬೆರೆತಿದ್ದಾರೆ. ಹೀಗಾಗಿಯೇ ಜಿ.ಎಚ್‌.ನಾಗರಾಜ್‌ ಈಗಲೂ ಎಲ್ಲರಿಗೂ ಬೇಕಾದವರಾಗಿದ್ದಾರೆ. ಜನರ ಪ್ರೀತಿಯನ್ನು ಗಳಿಸುತ್ತಿದ್ದಾರೆ.


ಜನರಿಗಾಗಿ ಏನನ್ನಾದರೂ ಮಾಡಬೇಕೆಂಬ ಕಾರಣದಿಂದಾಗಿಯೇ ಜಿ.ಎಚ್‌.ಎನ್‌.ಫೌಂಡೇಷನ್‌ ಸ್ಥಾಪನೆ ಮಾಡಲಾಗಿದೆ. ಇದರ ಮೂಲಕ ಜನಪರ ಕಾರ್ಯಗಳನ್ನು ಮಾಡಲಾಗುತ್ತಿದೆ. ಇದೀಗ ಜಿ.ಎಚ್‌.ನಾಗರಾಜ್‌ ಅವರ ಮಗ ವಿನಯ್‌ ಶ್ಯಾಮ್‌ ಅವರು ಕೂಡಾ ಬಡವರ ಸೇವೆಯಲ್ಲಿ ತೊಡಗಿದ್ದಾರೆ. ಯುವಕರ ಪಾಲಿನ ಆಶಾಕಿರಣವಾಗುತ್ತಿದ್ದಾರೆ. ಸದ್ದಿಲ್ಲದೇ, ಯಾವುದೇ ಆಡಂಬರ, ಪ್ರಚಾರವಿಲ್ಲದೆ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಜನರು ಕೆಲಸವಿಲ್ಲದೆ ಪರದಾಡುತ್ತಿರುವ ಸಂದರ್ಭದಲ್ಲಿ ಅವರಿಗೆ ನೆರವಾಗುತ್ತಿದ್ದಾರೆ. ಬಡವರ ಮನೆಗಳಿಗೇ ಆಹಾರ ಧಾನ್ಯಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತಂದೆಯಂತೆಯೇ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಪ್ರೀತಿಯನ್ನು ಗಳಿಸುತ್ತಿದ್ದಾರೆ. ಹೆಸರಿನಂತೆ ಇವರಲ್ಲಿ ವಿನಯ ಇದೆ. ಹಿರಿಯರಿಗೆ ಗೌರವ ಕೊಡುತ್ತಾ ಮುಂದೆ ಸಾಗುತ್ತಿದ್ದಾರೆ.

 

Leave a Reply

Your email address will not be published. Required fields are marked *