ಕೊರೊನಾ; ಸರ್ಕಾರ ಸರಿ ಮಾಡುತ್ತಿದೆ; ಮಾಧ್ಯಮಗಳೇ ತಪ್ಪು ಮಾಡುತ್ತಿರುವುದು..!

Share This

ಸರ್ಕಾರಗಳು ತಪ್ಪು ಮಾಡಿದಾಗ ಎಚ್ಚರಿಸುವುದು ಮಾಧ್ಯಮಗಳ ಕೆಲಸ.. ಆದರೆ ಕೊರೊನಾ ಸೋಂಕಿತರ ವರದಿ ತಯಾರಿಸುವ ವಿಚಾರದಲ್ಲಿ ಸರ್ಕಾರ ಸರಿಯಾಗಿ ನಡೆದುಕೊಳ್ಳುತ್ತಿದೆ. ಆದರೆ ಮಾಧ್ಯಮಗಳು ಮಾತ್ರ ಜನರ ಭೀತಿ ಹೆಚ್ಚಿಸುತ್ತಿವೆ. ಬೆಳಗಾದರೆ ಸಾಕು ಮಾಧ್ಯಮಗಳಲ್ಲಿ ಬರೀ ಸಾಧ್ಯತೆಗಳ ಸುದ್ದಿಗಳೇ. ಆ ಊರಿನಲ್ಲಿ ಇಷ್ಟು ಪಾಸಿಟಿವ್‌ ಕೇಸ್‌ ಆಗಬಹುದು, ಈ ಊರಿನಲ್ಲಿ ಇಷ್ಟು ಕೇಸ್‌ ಗಳಾಬಹುದು ಎಂಬ ಸುದ್ದಿಗಳೇ ಹರದಾಡುತ್ತವೆ. ಇವತ್ತೂ ರಾಜ್ಯದಲ್ಲಿ ಕೊರೊನಾ ಸ್ಫೋಟವಾಗುತ್ತಾ..? ಇವತ್ತೂ ಸೋಂಕಿತರ ಸಂಖ್ಯೆ ಸಾವಿರ ದಾಟುತ್ತಾ..? ಎಂಬ ಪ್ರಶ್ನೆಗಳೇ ಜನರನ್ನು ಮತ್ತಷ್ಟು ಭೀತಿಗೆ ತಳ್ಳುತ್ತವೆ. ಕೊರೊನಾದಿಂದ ಸಾವಿರಕ್ಕೊಬ್ಬರು ಸತ್ತರೆ ಅದನ್ನೇ ದೊಡ್ಡದು ಮಾಡಿ ಕಿಲ್ಲರ್‌ ಕೊರೊನಾ ಎಂಬ ವರದಿಗಳು ಕರ್ಕಶ ಧ್ವನಿಗಳಲ್ಲಿ ಬಿತ್ತರವಾಗುತ್ತವೆ.

ಇನ್ನು ಸಂಜೆ ಆ ದಿನದ ಕೊರೊನಾ ರಿಪೋರ್ಟ್‌ ಬರುತ್ತಿದ್ದಂತೆ ಮೊದಲು ಮಾಡೋದು ಎಷ್ಟು ಜನಕ್ಕೆ ಕೊರೊನಾ ಬಂದಿದೆ ಎಂಬ ವರದಿಯನ್ನು. ಅನಂತರ ಒಟ್ಟಾರೆ ಇದುವರೆಗೆ ಎಷ್ಟು ಜನಕ್ಕೆ ಕೊರೊನಾ ತಗುಲಿದೆ ಅಂತ (ಗುಣಮುಖರಾದವರನ್ನೂ ಸೇರಿಸಿಕೊಂಡು). ಆದರೆ ಇದುವರೆಗೆ ಎಷ್ಟು ಜನ ಗುಣಮುಖರಾಗಿದ್ದಾರೆ..? ಆಸ್ಪತ್ರೆಯಲ್ಲಿ ಇರೋದು ಎಷ್ಟು ಜನ..? ಈ ಬಗ್ಗೆ ಜನರಿಗೆ ಮನದಟ್ಟು ಮಾಡುವ ರೀತಿಯಲ್ಲಿ ಸುದ್ದಿಗಳು ಬರುವುದೇ ಕಡಿಮೆ. ಈ ಕಾರಣಕ್ಕಾಗಿಯೇ ಕೊರೊನಾ ಎಂಬುದು ಸಹಜ ಸ್ಥಿತಿಗಿಂತ ಹೆಚ್ಚು ಭಯಾನಕವಾಗಿ ಕಾಣುತ್ತಿದೆ.

ಹಾಗೆ ನೋಡಿದರೆ ಸರ್ಕಾರವೇ ಬೆಸ್ಟ್‌..!

ಸಾಕಷ್ಟು ವಿಚಾರದಲ್ಲಿ ತಪ್ಪು ಮಾಡುವ ಸರ್ಕಾರ ಈ ಕೊರೊನಾ ವರದಿ ನೀಡುವ ವಿಚಾರದಲ್ಲಿ ಮಾತ್ರ ಜನರ ಭೀತಿ ತಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಪ್ರತಿದಿನ ರಾಜ್ಯ ಸರ್ಕಾರ ನೀಡುವ ವರದಿಯನ್ನು ನೋಡಿದರೆ ನಿಮಗದು ಅರ್ಥವಾಗುತ್ತದೆ. ಹೌದು, ಸರ್ಕಾರದ ಪ್ರತಿದಿನದ ವರದಿಯಲ್ಲಿ ಮೊದಲು ನಮಗೆ ಕಾಣಸಿಗೋದು, ಎಷ್ಟು ಜನ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂಬ ವರದಿ. ಅನಂತರ ಇದುವರೆಗೆ ಎಷ್ಟು ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂಬ ವಿಚಾರ ಸಿಗುತ್ತದೆ. ಅನಂತರವೇ ಇವತ್ತಿನ ಪ್ರಕರಣ ಸಂಖ್ಯೆ ಸಿಗುವುದು. ಇದೆಲ್ಲಾ ಕೊಟ್ಟಾದ ಮೇಲೆ ಸಾವಿನ ಸಂಖ್ಯೆ, ಒಟ್ಟಾರೆ ಸೋಂಕಿತರ ಸಂಖ್ಯೆ (ಗುಣಮುಖರಾದವರೂ ಸೇರಿ) ನೀಡಲಾಗುತ್ತದೆ.

ಜನಕ್ಕೆ ಮೊದಲು ಎಷ್ಟು ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂಬುದು ಗೊತ್ತಾದರೆ ಸ್ವಲ್ಪ ಸಮಾಧಾನವಾಗುತ್ತದೆ. ಈ ಕಾರಣಕ್ಕಾಗಿ ಸರ್ಕಾರ ನೀಡುತ್ತಿರುವ ವರದಿ ಸರಿಯಾಗಿದೆ. ಆದರೆ ನಾವು ಹೊಸ ಸೋಂಕಿತರು, ಸಾವುಗಳ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿರುವುದು ಸಮಾಜದಲ್ಲಿ ಆತಂಕ ಹೆಚ್ಚಾಗಲು ಕಾರಣವಾಗುತ್ತಿದೆ.

 

ಜುಲೈ ೨ರ ಕೊರೊನಾ ವರದಿಯನ್ನು ಸರ್ಕಾರ ನೀಡಿದ ವರದಿಯಂತೆ ನೋಡುವುದಾದರೆ,

ಇಂದು ಆಸ್ಪತ್ರೆಯಿಂದ ಬಿಡುಗಡೆಯಾದವರು – ೨೭೧

ಇದುವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು – ೮೩೩೪

ಹೊಸ ಸೋಂಕಿತ ಪ್ರಕರಣಗಳು – ೧೫೦೨

ಒಟ್ಟು ಸಕ್ರಿಯ ಪ್ರಕರಣಗಳು – ೯೪೦೬

ಇಂದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ – ೧೯

ಇದುವರೆಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರು – ೨೭೨

ಸೋಂಕಿತರಾಗಿದ್ದು ಅನ್ಯ ಕಾರಣದಿಂದ ಮೃತಪಟ್ಟವರು – ೦೪

ಇದುವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರು – ೧೮೦೧೬

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು – ೧೬೧

 

 

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು..? 

ಮೈಸೂರು 51 + 17 = 68
ಬೆಂಗಳೂರುನಗರ 889
ದಕ್ಷಿಣಕನ್ನಡ 90
ಬಳ್ಳಾರಿ 65
ಧಾರವಾಡ 47
ವಿಜಯಪುರ 39
ರಾಮನಗರ 39
ಕಲಬುರಗಿ 38
ಬೀದರ್ 32
ತುಮಕೂರು 26
ಶಿವಮೊಗ್ಗ 23
ಮಂಡ್ಯ 19
ಉತ್ತರಕನ್ನಡ 17
ಹಾಸನ 15
ಉಡುಪಿ 14
ಕೋಲಾರ 12
ರಾಯಚೂರು 11
ಬಾಗಲಕೋಟೆ 10
ದಾವಣಗೆರೆ 08
ಯಾದಗಿರಿ 07
ಬೆಳಗಾವಿ 07
ಕೊಡಗು 06
ಬೆಂಗಳೂರು ಗ್ರಾ 05
ಹಾವೇರಿ 04
ಕೊಪ್ಪಳ 04
ಚಿತ್ರದುರ್ಗ 03
ಗದಗ 02
ಚಿಕ್ಕಬಳ್ಳಾಪುರ 01
ಚಿಕ್ಕಮಗಳೂರು 01

ರಾಜ್ಯದಲ್ಲಿ ಇಂದು ಹೊಸದಾಗಿ 51 + 1451 = 1502 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 18016 ಕ್ಕೆ ಏರಿಕೆ

ಇಂದು ಗುಣಮುಖರಾದವರು 271

ಒಟ್ಟು ಗುಣಮುಖರಾದವರು 8334

ಸಕ್ರಿಯ ಪ್ರಕರಣಗಳು 9406

ಇಲ್ಲಿಯವರೆಗೆ ಒಟ್ಟು ಸಾವು 272 ( ಮೈಸೂರು 04 )

Leave a Reply

Your email address will not be published. Required fields are marked *