ಬಿಎಂಟಿಸಿ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ

Share This

ನಗರದ ಬನಶಂಕರಿ ಟಿಟಿಎಂಸಿ ಬಸ್ ಡಿಪೋ ವ್ಯಾಪ್ತಿಯ ಬಿಎಂಟಿಸಿ ಸಿಬ್ಬಂದಿಗಳಿಗೆ ಮೀಡಿಯಾ ಕನೆಕ್ಟ್ ಸಹಯೋಗದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಹಾಗೂ ಅಕಿರಾ ಇವೆಂಟ್ಸ್ ತಂಡವರಿಂದ 500ಕ್ಕೂ ಅಧಿಕ ಮಾಸ್ಕ್‌ ಗಳು ಮತ್ತು ಸ್ಯಾನಿಟೈಸರ್ ಗಳನ್ನ ಉಚಿತವಾಗಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯ ಆಯೋಜಕಿ, ನಿರ್ದೇಶಕಿ ಹಾಗೂ ಮಿಸೆಸ್ ಏಶಿಯಾ ಇಂಟರ್ನ್ಯಾಷನಲ್ ಪ್ರತಿಭಾ ಸಂಶಿಮಠ,”ನಗರದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದರು ಬಿಎಂಟಿಸಿ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಮತ್ತು ಅಪಾಯ ಲೆಕ್ಕಿಸದೆ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ಅಸಂಖ್ಯಾತ ಪ್ರಯಾಣಕರಿಗೆ ಸಾರಿಗೆ ಅವ್ಯವಸ್ಥೆಯಾಗದ ನಿಟ್ಟಿನಲ್ಲಿ ದಿಟ್ಟವಾಗಿ ಸೇವೆ ಸಲ್ಲಿಸುತ್ತಿರುವ ಬಿಎಂಟಿಸಿ ಸಿಬ್ಬಂದಿಯ ಸೇವಾ ಮನೋಭಾವ ಅಮೋಘವಾದದ್ದು. ಈ ಕಾರಣಕ್ಕೆ ಅವರ ಆರೋಗ್ಯದ ಕಾಳಜಿಯಿಂದಾಗಿ ನಮ್ಮ ಸಂಸ್ಥೆಯು ಅವರಿಗೆ ಮಾಸ್ಕ್ ವಿತರಿಸುವ ಮೂಲಕ ಅವರ ಬೆಂಬಲಕ್ಕೆ ನಿಲ್ಲುವ ಪ್ರಯತ್ನ ಮಾಡಿದೆ. ಸೋಂಕಿನಿಂದ ಬಿಎಂಟಿಸಿ ಸಿಬ್ಬಂದಿಗಳನ್ನ ರಕ್ಷಿಸುವ ಹಿತದೃಷ್ಟಿಯಿಂದ ನಾವು ನಿರಂತರವಾಗಿ ಈ ಕಾರ್ಯವನ್ನ ಮುಂದುವರೆಸಲು ಹೆಮ್ಮೆಪಡುತ್ತೇವೆ,” ಎಂದು ಹೇಳಿದರು.

ಮಾಸ್ಕ್ ಪಡೆದ ಬಿಎಂಟಿಸಿ ಸಿಬ್ಬಂದಿಯೊಬ್ಬರು,”ಜನ ನಮ್ಮ ಸೇವೆಯನ್ನ ಗುರುತಿಸಿ ನಮ್ಮ ಆರೋಗ್ಯದ ಕಾಳಜಿವಹಿಸುತ್ತಿರುವುದು ನಮಗೆಲ್ಲಾ ಸಂತಸ ಮೂಡಿಸಿದೆ. ದಿನ ನಿತ್ಯ ಲೆಕ್ಕವಿಲ್ಲದಷ್ಟು ಜನರ ಜೊತೆಗೆ ಸಂಚರಿಸುವುದರಿಂದ ಸೋಂಕಿಗೆ ತುತ್ತಾಗುವ ಅಪಾಯ ಅಧಿಕ. ಈ ನಿಟ್ಟಿನಲ್ಲಿ ನಮ್ಮ ಸುರಕ್ಷತೆಗೆ ಮಾಸ್ಕ್ ನೀಡಿರುವುದರಿಂದ ಅಪಾಯವನ್ನ ಸಾಧ್ಯವಾದಷ್ಟು ತಡೆಗಟ್ಟಬಹುದಾಗಿದೆ,” ಎಂದರು.

ಬಿಎಂಟಿಸಿ ವಿಭಾಗೀಯ ನಿಯಂತ್ರಕರಾದ ಜಗದೀಶ್,”ಸಾರ್ವಜನಿಕ ಸೇವೆಗಾಗಿ ಶ್ರಮಿಸುತ್ತಿರುವವರನ್ನ ಗುರುತಿಸಿ ಅವರ ಕಾರ್ಯ ಶ್ಲಾಘಿಸುವುದರಿಂದ ಅವರಲ್ಲಿ ಕರ್ತವ್ಯದ ಕುರಿತು ಮತ್ತಷ್ಟು ಉತ್ಸಾಹ ಮೂಡುತ್ತದೆ. ನಮ್ಮ ಸಿಬ್ಬಂದಿಗಳ ಸೇವೆಯನ್ನ ಅರಿತು ಅವರ ಕಾಳಜಿಯ ದೃಷ್ಟಿಯಿಂದ ಉಚಿತವಾಗಿ ನೂರಾರು ಮಾಸ್ಕ್ಗಳನ್ನ ನೀಡಿರುವುದು ನಮಗೆ ಖುಷಿಯ ಸಂಗತಿಯಾಗಿದೆ. ಈ ರೀತಿಯ ಕಾರ್ಯಗಳು ಮತ್ತಷ್ಟು ಜನರಿಂದ ಕೈಗೂಡಲಿ ಎಂದು ಆಶಿಸುತ್ತೇನೆ,” ಎಂದರು.

ಕಾರ್ಯಕ್ರಮದಲ್ಲಿ ಬನಶಂಕರಿ ಬಿಎಂಟಿಸಿ ಡಿಪೋ ವ್ಯವಸ್ಥಾಪಕರಾದ ಮಧುಸೂದನ್ ರೆಡ್ಡಿ, ಮೀಡಿಯಾ ಕನೆಕ್ಟ್ ಸಿಇಒ ದಿವ್ಯಾ ರಂಗೇನಹಳ್ಳಿ, ಸಂಜಾ ಬೂಟಿಕ್ ಮುಖ್ಯಸ್ಥೆ ರಿಯಾ ಹಾಗೂ ಹಲವು ಚಾಲಕರು ಮತ್ತು ನಿರ್ವಾಹಕರುಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *