ಇದು ನದಿಯಲ್ಲ.. ಕಾಮನಬಿಲ್ಲು..! 5 ಬಣ್ಣಗಳಾಗಿ ಹರಿಯುತ್ತೆ ಕಾನೋ ಕ್ರಿಸ್ಟಲ್‌..!

Share This

https://youtu.be/N1tEh4TyYiA

ನೀರಿಗೆ ಬಣ್ಣವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ.. ಆದರೆ ಈ ನದಿ ಅದಕ್ಕೆ ಅಪವಾದ.. ಯಾಕಂದ್ರೆ ಈ ನದಿಯ ನೀರಿಗೆ ಒಂದಲ್ಲ, ಎರಡಲ್ಲ.. ಐದು ಬಣ್ಣಗಳಿವೆ.. ಇದು ಯಾವಾಗಲೂ ಕಾಮನಬಿಲ್ಲಿನಂತೆ ಗೋಚರಿಸುತ್ತದೆ.. ಈ ನದಿಯ ಹೆಸರು ಕಾನೋ ಕ್ರಿಸ್ಟಲ್ಸ್‌.. ಕೊಲಂಬಿಯಾದ ಮಾಕಾರೇನಿಯಾ ಪ್ರಾಂತ್ಯದಲ್ಲಿ ಬಣ್ಣಗಳ ಚಿತ್ತಾರಗಳನ್ನು ಮೂಡಿಸುತ್ತಾ ಹರಿಯುತ್ತದೆ.. ಇದು ಪ್ರಪಂಚ ಅತ್ಯಂತ ಸುಂದರ ಹಾಗೂ ನಯನಮನೋಹರವಾದ ನದಿ..


ಅಂದಹಾಗೆ, ಈ ನದಿ ನೀರು ಬಣ್ಣಗಳಿಂದ ಕೂಡಿಲ್ಲ.. ಎಲ್ಲಾ ನೀರಿನಂತೆ ಈ ನೀರಿಗೂ ಯಾವ ಬಣ್ಣವೂ ಇಲ್ಲ.. ಆದರೆ, ಬೆಳಕಿನ ಕಾರಣದಿಂದ ಈ ನದಿ ನೀರು ಐದು ಬಣ್ಣಗಳಾಗಿ ಕಾಣಿಸುತ್ತವೆ.. ಅಂದಹಾಗೆ ಜೂನ್‌ ತಿಂಗಳಿಂದ ನವೆಂಬರ್‌ ತಿಂಗಳವರೆಗೆ ಮಾತ್ರ ಕಾನೋ ಕ್ರಿಸ್ಟಲ್‌ ನದಿಯಲ್ಲಿ ಬಣ್ಣಗಳು ಕಾಣಿಸುತ್ತವೆ.. ನವೆಂಬರ್‌ ನಂತರ ನೀರು ಬಣ್ಣ ಕಳೆದುಕೊಂಡು ವರ್ಣರಹಿತವಾಗಿಯೇ ಹರಿಯುತ್ತದೆ..


ಕಾನೋ ಕ್ರಿಸ್ಟಲ್ಸ್‌ ನದಿಯ ತಳಭಾಗದಲ್ಲಿ ಪೂರ್ತಿ ಬಂಡೆಗಳೇ ಇವೆ.. ಜೂನ್‌ ತಿಂಗಳು ಬರುವ ವೇಳೆಗೆ ನೀರಿನ ಹರಿವು ಕಡಿಮೆಯಾಗುತ್ತದೆ.. ಹೀಗಾಗಿ ಬಿಸಿಲಿಗೆ ನದಿ ನೀರಿನ ತಳದಲ್ಲಿರುವ ಬಂಡೆಗಳು ಬಿಸಿಯಾಗುತ್ತವೆ.. ಇದರಿಂದಾಗಿ ಬಂಡೆಗಳ ಮೇಲೆ ಬೆಳೆದಿರುವ ಪಾಚಿ ಗಿಡಗಳು ಹೂವುಗಳನ್ನು ಅರಳಿಸುತ್ತವೆ.. ಇನ್ನೊಂದೆಡೆ ಕ್ಲಾವಿಗೆರಾ ಹೆಸರಿನ ಸಸ್ಯದ ಎಲೆಗಳು ಕೂಡಾ ಬಿಸಿಲಿನ ತಾಪಕ್ಕೆ ಕೆಂಪು ಬಣ್ಣಕ್ಕೆ ತಿರುಗುತ್ತವೆ.. ನದಿಯ ತಳದಲ್ಲಿರುವ ಹಳದಿ ಬಣ್ಣದ ಮರುಳು ಕೂಡಾ ಎದ್ದು ಕಾಣುತ್ತದೆ.. ಜೊತೆಗೆ ಹಸಿರು ಪಾಚಿ ಹೀಗೆ ಎಲ್ಲವೂ ಸೇರಿಕೊಂದು ನದಿಯನ್ನು ಕಾಮನಬಿಲ್ಲಿನಂತೆ ಮಾಡುತ್ತವೆ. ಹಳದಿ, ಹಸಿರು, ನೀಲಿ, ಕಪ್ಪು ಹಾಗೂ ಕೆಂಪು ಬಣ್ಣಗಳಲ್ಲಿ ಈ ನದಿ ಕಂಗೊಳಿಸುತ್ತದೆ.
ಕಾನೋ ಕ್ರಿಸ್ಟಲ್ಸ್‌ ನದಿ ಬರೋಬ್ಬರಿ ೯೦ ಕಿಲೋ ಮೀಟರ್‌ ಗೂ ಹೆಚ್ಚು ದೂರ ಹರಿಯುತ್ತದೆ.. ಅತಿ ಸುಂದರವಾದ ಈ ನದಿ ನೋಡಲು ಜೂನ್‌ ನಿಂದ ನವೆಂಬರ್‌ ತಿಂಗಳ ಅಂತರದಲ್ಲಿ ಮಾತ್ರ ಹೋಗಬೇಕು.. ಅದೂ ಈ ಪ್ರದೇಶಕ್ಕೆ ಭೇಟಿ ನೀಡಬೇಕು ಅಂದರೆ ಎಂಟೆದೆ ಗುಂಡಿಗೆ ಕೂಡಾ ಇರಬೇಕು. ಯಾಕೆಂದರೆ ಇಲ್ಲಿಗೆ ತೆರಳುವುದು ಅಷ್ಟು ಸುಲಭದ ಕೆಲಸವೇ ಅಲ್ಲ. ಇದೊಂದು ಅತ್ಯಂತ ದುರ್ಗಮದ ಹಾದಿ. ಸೂಕ್ತ ರಸ್ತೆ ಇಲ್ಲ. ಸಾಹಸಿ ಪ್ರವಾಸಿಗರು ಮಾತ್ರ ಚಾರಣದ ಮೂಲಕ ಈ ನದಿಯನ್ನು ತಲುಪುತ್ತಾರೆ.


ಈ ನದಿ ಬೇಸಿಗೆಯಲ್ಲಿ ಮಾತ್ರ ರಭಸವಾಗಿ ಹರಿಯುತ್ತದೆ. ಅಲ್ಲಲ್ಲಿ ನೈಸರ್ಗಿಕ ಈಜುಕೊಳಗಳು ನಿರ್ಮಾಣವಾಗಿವೆ. ಜಲಪಾತಗಳಾಗಿಯೂ ಇದು ಧುಮ್ಮಿಕ್ಕುತ್ತಾ ನಮ್ಮ ಮನಸೂರೆಗೊಳ್ಳುತ್ತದೆ. ನವೆಂಬರ್‌ ಮುಗಿಯುತ್ತಿದ್ದಂತೆ ನದಿಯಲ್ಲಿ ನೀರು ಖಾಲಿಯಾಗುತ್ತದೆ. ಪಾಚಿ ಒಣಗಲು ಆರಂಭವಾಗುತ್ತದೆ. ಈ ಸಮಯದಲ್ಲಿ ನದಿ ತನ್ನ ಸೌಂದರ್ಯವನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುತ್ತವೆ. ಮತ್ತೆ ಜೂನ್‌ ಗೆ ತನ್ನ ಭೋರ್ಗರೆತ ಶುರು ಮಾಡುತ್ತದೆ.

Leave a Reply

Your email address will not be published. Required fields are marked *