May 31, 2020

ಹಣೆಗೆ ವಿಭೂತಿ ಏಕೆ ಹಚ್ಚುತ್ತಾರೆ..?  ಇದರ ಮಹತ್ವವೇನು..?

Share This

ಶಿವ ಭಕ್ತರು, ಲಿಂಗಾಯತರು, ಬ್ರಾಹ್ಮಣರು ಹಾಗೂ ದೈವ ಭಕ್ತರು ಯಾವಾಗಲೂ ಹಣೆಗೆ ವಿಭೂತಿ ಹಚ್ಚುತ್ತಾರೆ. ದೇವಸ್ಥಾನಗಳಲ್ಲಿ ಪೂಜಾರಿಗಳು ವಿಭೂತಿ ಹಚ್ಚಿಯೇ ಪೂಜೆ  ಶುರು ಮಾಡುವುದು. ವಿಭೂತಿ ಅಥವಾ ಭಸ್ಮವನ್ನು ಹಣೆಯ ಮೇಲೆ ಮೂರು ಸಾಲಿನಲ್ಲಿ ಅಡ್ಡವಾಗಿ ಹಚ್ಚುತ್ತಾರೆ. ದೇಹದ ಇತರ ಭಾಗಗಳಲ್ಲೂ ಕೆಲವರು ವಿಭೂತಿ ಧಾರಣೆ ಮಾಡಿಕೊಳ್ಳುತ್ತಾರೆ. ಹೀಗೆ ವಿಭೂತಿ ಹಚ್ಚಿಕೊಳ್ಳುವ ವಿಧಾನವೂ ವಿಶೇಷವಾಗಿರುತ್ತದೆ. ತೋರು ಬೆರಳು, ಮಧ್ಯ ಬೆರಳು ಹಾಗೂ ಉಂಗುರದ ಬೆರಳುಗಳಿಗೆ ವಿಭೂತಿ ತಿಕ್ಕಿಕೊಂಡು ಅದನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ.

 

ಭ್ರುಗು ಮಹರ್ಷಿಯ ಅಹಂಕಾರ ಮತ್ತು ಮುದುಕನ ವೇಷಧಾರಿ ಶಿವ

ಭ್ರುಗು ಮಹರ್ಷಿ ಕಾಡಿನಲ್ಲಿ ತಪ್ಪುಸ್ಸು ಆಚರಿಸುತ್ತಿದ್ದನು. ಒಮ್ಮೆ ಆತ ಕಾಡಿನಲ್ಲಿ ಹುಲ್ಲನ್ನು ಕತ್ತರಿಸುವಾಗ ಆಕಸ್ಮಿಕವಾಗಿ ತಮ್ಮ ಬೆರಳನ್ನು ಕತ್ತರಿಸಿಕೊಳ್ಳುತ್ತಾನೆ. ಈ ವೇಳೆ ಆತನ ಬೆರಳಿನಿಂದ ರಕ್ತ ಜಿನುಗುವ ಬದಲು ಮರವೊಂದನ್ನು ಕತ್ತರಿಸಿದಾಗ ಬರುವ ದ್ರವದಂತೆ ಸೋರಲಾರಂಭಿಸುತ್ತದೆ. ಇದನ್ನು ನೋಡಿದ ಭ್ರುಗು ಮಹರ್ಷಿ, ತನ್ನ  ತಪಸ್ಸಿನ ಫಲದಿಂದ ಹೀಗೆ ಆಗಿದೆ ಎಂದು ಅಹಂಕಾರಪಡುತ್ತಾನೆ.

ಇದನ್ನು ತಿಳಿದ ಶಿವನು ಒಬ್ಬ ವೃದ್ಧವ ವೇಷಧಾರಿಯಾಗಿ ಬಂದು ಏಕೆ ಇಷ್ಟೊಂದು ಸಂಭ್ರಮ ಪಡುತ್ತಿರುವೆ ಎಂದು ಭ್ರುಗು ಮಹರ್ಷಿಯನ್ನು ಕೇಳುತ್ತಾನೆ. ಆಗ ಆ ಭ್ರುಗು ಮಹರ್ಷಿ ನಡೆದದ್ದನ್ನು ತಿಳಿಸಿ, ಅಹಂಕಾರದಿಂದ ಮೆರೆಯುತ್ತಾನೆ. ಇದನ್ನು ಕೇಳಿದ ವೃದ್ಧನ ವೇಷದಲ್ಲಿದ್ದ ಶಿವ ಅದರಲ್ಲಿ ವಿಶೇಷವೇನಿದೆ. ಮರ ಕತ್ತರಿಸಿ ಸುಟ್ಟರೆ ಭಸ್ಮವಾಗುತ್ತದೆ ಎಂದು ಹೇಳುತ್ತಾನೆ. ನಂತರ ತನ್ನ ಬೆರಳು ಕತ್ತರಿಸಿಕೊಳ್ಳುತ್ತಾನೆ. ಆಗ ಕೈನಿಂದ ಭಸ್ಮ ಸುರಿಯುತ್ತದೆ. ಇದನ್ನು ನೋಡಿದ ಭ್ರುಗು ಮಹರ್ಷಿಗೆ ತಮ್ಮ ತಪ್ಪು ಅರಿವಾಗುತ್ತದೆ. ಅಂದಿನಿಂದ ಭಸ್ಮ ಎಂಬುದು ಒಂದು ಅಂಶ ಎಂದು ಪರಿಗಣಿಸಲ್ಪಟ್ಟಿದೆ.

ವಿಭೂತಿ ಅಥವಾ ಭಸ್ಮಕ್ಕೆ ಕಟ್ಟದನ್ನು ನಾಶ ಮಾಡುವ ಶಕ್ತಿ ಇರುತ್ತದಂತೆ. ವಿಭೂತಿ ಧರಿಸಿಕೊಂಡರೆ ಯಾವುದೇ ಋಣಾತ್ಮಕ ಅಥವಾ ದುಷ್ಟಶಕ್ತಿಗಳು ನಮ್ಮನ್ನು ಕಾಡುವುದಿಲ್ಲವಂತೆ. ನಮ್ಮ ಪಾಪಗಳನ್ನು ಕೂಡಾ ನಾಶ ಮಾಡುವ ಶಕ್ತಿ ಈ ವಿಭೂತಿಗೆ ಇದೆಯಂತೆ.

ಯಾವುದೇ ವಸ್ತುವನ್ನು ಸುಟ್ಟರೂ ಅದರಿಂದ ಭಸ್ಮ ಸೃಷ್ಟಿಯಾಗುತ್ತದೆ. ಆದರೆ ಆ ಯಾವ ಭಸ್ಮವೂ ಪವಿತ್ರವಾಗುವುದಿಲ್ಲ.  ಶುದ್ಧ ನಾಟಿ ಹಸುವಿನ ಹಾಲು, ತುಪ್ಪ, ಜೇನುತುಪ್ಪದಿಂದ ಸಗಣಿಯನ್ನು ಸುಟ್ಟಾಗ ಬರುವ ಭಸ್ಮ ಶ್ರೇಷ್ಠ ಎಂದು ನಂಬಲಾಗಿದೆ. ಇದನ್ನೇ ವಿಭೂತಿ ಎಂದು ಕರೆಯಲಾಗುತ್ತದೆ.

ಮೂರು ಗೆರೆಯೇ ಏಕೆ ಹಚ್ಚಬೇಕು..?

ತೋರು ಬೆರಳು, ಮಧ್ಯ ಬೆರಳು ಹಾಗೂ ಉಂಗುರದ ಬೆರಳುಗಳ ಮೂಲ ಹಣೆಗೆ ಮೂರು ಗೆರೆಗಳಾಗಿ ವಿಭೂತಿಯನ್ನು ಹಚ್ಚಿಕೊಳ್ಳುತ್ತಾರೆ. ಇದರ ಅರ್ಥ ಮೊದಲ ಸಾಲು ನಮ್ಮಲ್ಲಿನ ಅಹಂಕಾರವನ್ನು ತೊಡೆದುಹಾಕುತ್ತದೆ. ಎರಡನೆಯ ಸಾಲು ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡುತ್ತದೆ. ಮೂರನೆಯ ಸಾಲು ನಮ್ಮಲ್ಲಿನ ಕೆಟ್ಟ ಗುಣಗಳನ್ನು, ನಾವು ಮಾಡಿರುವ ಪಾಪಗಳನ್ನು ತೊಡೆದುಹಾಕುತ್ತದೆ.

ಆಯುರ್ವೇದದಲ್ಲಿ ಭಸ್ಮದ ಬಳಕೆ

ಭಾರತದಲ್ಲಿ ಭಸ್ಮ ಧಾರಣೆ ಒಂದು ನಂಬಿಕೆ. ಇದರ ಜೊತೆಗೆ ಈ ಭಸ್ಮವನ್ನು ಆಯುರ್ವೇದದಲ್ಲಿ ಔಷಧ ತಯಾರಿಕೆಯಲ್ಲೂ ಬಳಕೆ ಮಾಡುತ್ತಾರೆ. ಚೀನೀಯರು, ಟಿಬೆಟಿಯನ್ನರು ಕೂಡಾ ಕೆಲವೊಂದು ಔಷಧಿ ತಯಾರಿಕೆಯಲ್ಲಿ ಈ ಭಸ್ಮವನ್ನು ಉಪಯೋಗಿಸುತ್ತಾರಂತೆ. ತಲೆನೋವು, ಆತಂಕ, ಗೊಂದಲಗಳು ನಿವಾರಣೆಯಾಗಿ ನಮ್ಮ ದೇಹದಲ್ಲಿ ಧನಾತ್ಮಕ ಶಕ್ತಿಯ ಸಂಚಾರವಾಗುತ್ತದೆ ಎಂದು ಹೇಳಲಾಗಿದೆ.

 

 

 

Leave a Reply

Your email address will not be published. Required fields are marked *