ಲಂಡನ್‌ ರಾಣಿಯ ಕಿರೀಟ ಕಾಯೋದು ಕಾಗೆಗಳು..!

Share This

ಲಂಡನ್‌ ಟವರ್‌.. ಈ ಹೆಸರು ಕೇಳುತ್ತಿದ್ದಂತೆ ನಮಗೆ ನೆನಪಿಗೆ ಬರೋದು ಕೊಹಿನೂರ್‌ ವಜ್ರ.. ಥೇಮ್ಸ್‌ ನದಿಯ ದಡದಲ್ಲಿರುವ ಈ ಟವರ್‌ ಮೂರು ಅಂತಸ್ತಿನಿಂದ ಕೂಡಿದೆ. ಈ ಕಟ್ಟಡದಲ್ಲೇ ಇರೋದು ಕೊಹಿನೂರ್‌ ವಜ್ರ. ಇದರ ಜೊತೆಗೆ ಲಂಡನ್‌ ರಾಣಿಯ ವಜ್ರ ಖಚಿತ ಕಿರೀಟಿ, ಕೋಟಿ ಕೋಟಿ ಬೆಲೆಯ ವಜ್ರಾಭರಣಗಳೂ ಇವೆ. ಹೀಗಾಗೇ ಈ ಟವರ್‌ ಆಫ್‌ ಲಂಡನ್‌ ಗೆ ಭದ್ರತೆಯ ಸರ್ಪಗಾವಲಿದೆ. ಇದು ಸಾಮಾನ್ಯವೂ ಕೂಡಾ. ಆದರೆ ವಿಶೇಷ ಎನಿಸೋದು ಭದ್ರತಾ ಸಿಬ್ಬಂದಿಯ ಜೊತೆಗೆ ಈ ಕಟ್ಟಡವನ್ನು ಏಳು ಕಾಗೆಗಳು ಕಾಯುತ್ತಿರೋದು..!

ಕಾಗೆಗಳು ಜಾಗ ಖಾಲಿ ಮಾಡಿದರೆ ಅಪಾಯ..!

The Ravens.. If the Ravens leave The tower.. The Kingdom will fall.. ಈ ಮಾತು ಬ್ರಿಟೀಷ್‌ ರಾಜಮನೆತನಲ್ಲಿ ಚಾಲ್ತಿಯಲ್ಲಿದೆ. ನೀವು ಟವರ್‌ ಆಪ್‌ ಲಂಡನ್‌ ಮ್ಯೂಸಿಯಂ ಬಳಿ ಹೋದರೆ ಚೆನ್ನಾಗಿ ತಿಂದು ದುಂಡಗಿರುವ ಏಳು ಕಾಗೆಗಳು ಕಣ್ಣಿಗೆ ಬೀಳುತ್ತವೆ. ಲಂಡನ್‌ ಟವರ್‌ ನ ದಕ್ಷಿಣದಲ್ಲಿ ಈ ಕಾಗೆಗಳನ್ನು ಸಾಕಲಾಗಿದೆ. ಇವು ಯಾವಾಗಲೂ ಈ ಕಟ್ಟಡದಲ್ಲಿಯೇ ಇರಬೇಕು. ಅಲ್ಲಿಂದ ಬೇರೆಡೆ ಹೊರಟರೆ ರಾಜಮನೆತನಕ್ಕೇ ಗಂಡಾಂತರವಾಗುತ್ತಂತೆ. ಟವರ್‌ ಆಫ್‌ ಲಂಡನ್‌ ಕುಸಿದುಬೀಳುತ್ತಂತೆ..! ಅಷ್ಟೇ ಅಲ್ಲ. ಇಡೀ ಇಂಗ್ಲೆಂಡ್‌ ದೇಶದಲ್ಲಿ ಅರಾಜಕತೆ ತಾಂತವವಾಡುತ್ತಂತೆ..! ಇಂತಹದ್ದೊಂದು ಮೂಢನಂಬಿಕೆ ಹಲವು ದಶಕಗಳಿಂದ ಇದೆ.

ಕಾಗೆಗಳನ್ನು ನೋಡಿಕೊಳ್ಳಲು ಇದ್ದಾನೆ ಮಾಸ್ಟರ್‌..!

ಈ ಕಾಗೆಗಳು ಟವರ್‌ ಆಫ್‌ ಲಂಡನ್‌ ನಲ್ಲಿರುವ ಕಿರೀಟ, ಕೊಹಿನೂರ್‌ ವಜ್ರಕ್ಕೆ ಕಾವಲಿವೆಯಂತೆ. ಜೊತೆಗೆ ಇವುಗಳಸುತ್ತ ಮೂಢನಂಬಿಕೆಯೊಂದು ಇರುವುದರಿಂದ ರಾಜಮನೆತನದವರು ಈ ಕಾಗೆಗಳಿಗೆ ರಾಜ ಮರ್ಯಾದೆ ನೀಡುತ್ತಾರೆ. ಇವುಗಳನ್ನು ನೋಡಿಕೊಳ್ಳಲೆಂದೇ ಒಬ್ಬ ಮಾಸ್ಟರ್‌ ನ್ನು ನೇಮಕ ಮಾಡಿದ್ದಾರೆ. ಆ ಕಾಗೆಗಳು ಮಾಸ್ಟರ್‌ ಹೇಳಿದಂತೆ ನಡೆಯುತ್ತವೆ. ಇವುಗಳಿಗೆ ದಿನವೂ ಇಲಿ, ಮಾಂಸದ ಚೂರು ಹಾಗೂ ರಕ್ತದಲ್ಲಿ ಅದ್ದಿದ ಬಿಸ್ಕೆಟ್‌ ಗಳನ್ನು ನೀಡಲಾಗುತ್ತದೆ.

ಕೋಪ ನೆತ್ತಿಗೇರಿದರೆ ದಾಳಿ ಮಾಡುವ ಕಾಗೆಗಳು..!

ಈ ಕಾಗೆಗಳು ಅಂತಿಂಥಾ ಕಾಗೆಗಳಲ್ಲ. ಕೋಪ ನೆತ್ತಿಗೇರಿದರೆ ದಾಳಿ ಮಾಡಿಬಿಡುತ್ತವೆ. ಹೀಗಾಗಿ ಯಾರಿಗೂ ಅವುಗಳನ್ನು ಮಾತನಾಡಿಸಲು ಅವಕಾಶ ನೀಡುವುದಿಲ್ಲ. ಜೊತೆಗೆ ಯಾರೂ ಅವಕ್ಕೆ ಆಹಾರವನ್ನೂ ನೀಡುವಂತಿಲ್ಲ. ಅರಮನೆಯಿಂದಲೇ ನೀಡುವ ಆಹಾರವನ್ನೇ ಅವು ತಿನ್ನುತ್ತವೆ. ಇನ್ನು ಈ ಕಾಗೆಗಳು ಎಲ್ಲಿಯೂ ಹೋಗದೇ ಅಲ್ಲಿಯೇ ಆಟವಾಡುತ್ತವೆ. ಜೊತೆಗೆ ಬೇರೆ ಬೇರೆ ಧ್ವನಿಗಳನ್ನು ಅನುಕರಿಸಿ ಮಿಮಿಕ್ರಿ ಕೂಡಾ ಮಾಡುತ್ತವೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುತ್ತಾ ಇರುತ್ತವೆ.

ಈ ಕಾಗೆಗಳಿಗೆ ಹೆಸರು ಕೂಡಾ ಇದೆ..!

ಹೌದು ಈ ಕಾಗೆಗಳಿಗೆ ಹೆಸರು ಕೂಡಾ ಇಟ್ಟಿದ್ದಾರೆ. ಮಾಸ್ಟರ್‌ ಹೆಸರಿಡಿದು ಕರೆದರೆ ಅವು ಬಂದು ಅವನ ಬಳಿ ಕೂರುತ್ತವೆ.  ಜ್ಯುಬಿಲಿ, ಹ್ಯಾರಿಸ್‌, ಗ್ರಿಪ್ಪಿ, ರಾಕಿ, ಎರಿನ್‌, ಪಾಪಿ ಮತ್ತು ಮೆರ್ಲಿನಾ ಇವೇ ಈ ಕಾಗೆಗಳ ಹೆಸರು. ಇವಕ್ಕೆ ಸುಂದರವಾದ ಗೂಡು ಕೂಡಾ ಇದೆ. ಇವು ಹಾಕುವ ಮರಿಗಳನ್ನು ಮುಂದೆ ಕಾವಲಿಗೆ ತರಬೇತಿ ನೀಡಲಾಗುತ್ತದೆ. ಇನ್ನು ಈ ಕಾಗೆಗಳು ದೂರ ಹಾರದಂತೆ ರೆಕ್ಕೆಗಳನ್ನು ಆಗಾಗ ಕತ್ತರಿಸುತ್ತಾರೆ ಕೂಡಾ.

Leave a Reply

Your email address will not be published. Required fields are marked *