ಮನುಷ್ಯ 4 ಕಾಲು ಬಿಟ್ಟು 2 ಕಾಲಿಗೆ ಬಂದಿದ್ದೇಕೆ..?

Share This

ಸೃಷ್ಟಿಯಲ್ಲಿರುವ ಎಲ್ಲಾ ಜೀವಿಗಳ ದೇಹಗಳಲ್ಲಿ ಮಾನವ ದೇಹವನ್ನು ಮೀರಿದ ವಿಚಿತ್ರವಾದ ದೇಹ ಇನ್ನೊಂದಿಲ್ಲ. ಇತರ ಪ್ರಾಣಿಗಳೆಲ್ಲಾ ನಾಲ್ಕು ಕಾಲಿನ ಮೇಲೆ ನಡೆಯುತ್ತವೆ. ಆದರೆ ಮನುಷ್ಯರಾದ ನಾವು ಮಾತ್ರ ಎರಡು ಕಾಲಿನ ಮೇಲೆ ನಡೆಯುತ್ತೇವೆ. ಎಲ್ಲಾ ಜೀವಿಗಳಿಗಿಂತಲೂ ನಮ್ಮ ದೇಹ ಅತ್ಯಂತ ಮೃದು.

ಸಣ್ಣ ಮುಳ್ಳು ಚುಚ್ಚಿದರೂ ನಮ್ಮ ದೇಹಕ್ಕೆ ನೋವಾಗುತ್ತದೆ. ಗಾಯವಾಗುತ್ತದೆ. ಆತ್ಮ ರಕ್ಷಣೆಗೆ ಇತರ ಪ್ರಾಣಿಗಳಿಗೆ ಇದ್ದಂತೆ ನಮಗೆ ಕೋರೆ ಹಲ್ಲುಗಳು ಕೂಡಾ ಇಲ್ಲ. ಗಟ್ಟಿಯಾದ ಉಗುರುಗಳೂ ಇಲ್ಲ. ವನ್ಯ ಪ್ರಾಣಿಗಳಿಗಿರುವಷ್ಟು ಶಕ್ತಿಯೂ ಇಲ್ಲ. ವಿಷ ಗ್ರಂಥಿಯಂತೂ ಮನುಷ್ಯನಲ್ಲಿ ಇಲ್ಲವೇ  ಇಲ್ಲ. ಆದರೂ ನಾವು ಎಲ್ಲಾ ಪ್ರಾಣಿಗಳನ್ನೂ ಜಯಸಿದ್ದೇವೆ. ಇಡೀ ಭೂಮಂಡಲವನ್ನು ಆಳುತ್ತಿದ್ದೇವೆ. ಎಷ್ಟು ವಿಚಿತ್ರ ಅಲ್ಲವೇ..?

ಮೊದಲು ವಾನರ ರೂಪದಲ್ಲಿದ್ದ ನಾವು ಕೂಡಾ ನಾಲ್ಕು ಕಾಲಿನ ಮೇಲೆಯೇ ನಡೆಯುತ್ತಿದ್ದದ್ದು. ಅಲ್ಲಿಂದ ಹೇಗೆ ಎರಡು ಕಾಲಿನ ಮೇಲೆ ನಡೆಯಲು ಶುರು ಮಾಡಿದೆವು ಎಂದು ಹೇಳುವುದು ಕಷ್ಟಸಾಧ್ಯದ ಮಾತು. ಯಾಕೆಂದರೆ, ಎರಡು ಕಾಲ ಮೇಲೆ ನಡೆಯುವುದಕ್ಕಿಂತ ನಾಲ್ಕು ಕಾಲಿನ ಮೇಲೆ ನಡೆಯುವುದರಿಂದ ದೇಹದ ಬ್ಯಾಲೆನ್ಸ್‌ ಸಕ್ರಮವಾಗಿರುತ್ತದೆ. ಹಾಗೆಯೇ ಎರಡು ಕಾಲ ಮೇಲೆ ನಡೆಯುವುದಕ್ಕಿಂತ ನಾಲ್ಕು ಕಾಲಿನ ಮೇಲೆ ಎರಡು ಪಟ್ಟು ವೇಗವಾಗಿ ನಡೆಯುವುದು, ಓಡುವುದು ಸಾಧ್ಯವಾಗುತ್ತದೆ.

ವನ್ಯ ಪ್ರಾಣಿಗಳು ನಮಗಿಂತ ಹೆಚ್ಚು ವೇಗವಾಗಿ ಓಡುವುದೇ ಇದಕ್ಕೆ   ಉದಾಹರಣೆ. ಎಲ್ಲದಕ್ಕೂ ಕಷ್ಟವಾಗುವ, ದೇಹಕ್ಕೆ ಅಷ್ಟು ಹೊಂದಿಕೆಯಾಗದ ಎರಡು ಕಾಲಿನ ಮೇಲಿನ ನಡಿಗೆಯನ್ನು ನಾವು ಹೇಗೆ ರೂಢಿಸಿಕೊಂಡೆವು..? ಯಾವ ಕಾರಣಕ್ಕಾಗಿ ಬಂದೆವು..? ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

ಎರಡು ಕಾಲಿನ ಮೇಲೆ ಮನಷ್ಯ ನಡೆಯಲು ಶುರು ಮಾಡಿದ್ದರ ಬಗ್ಗೆ ಎರಡು ಮೂರು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದೆ.

ಮೊದಲನೆಯ ಸಿದ್ಧಾಂತ

ಆದಿ ಮಾನವ ಮೊದಲು ಕಾಡಿನಲ್ಲಿ ಗೆಡ್ಡೆ ಗೆಣಸು, ಹಣ್ಣ, ಹಂಪಲು ತಿಂದು ಬದುಕುತ್ತಿದ್ದ. ಬರಬರುತ್ತಾ ಮೈದಾನ ಪ್ರದೇಶಕ್ಕೆ ಬಂದು ಪ್ರಾಣಿಗಳನ್ನು ಬೇಟಯಾಡಿ ಜೀವಿಸುವುದನ್ನು ಕಲಿತುಕೊಂಡ. ಈ ಸಮಯದಲ್ಲಿ ಎತ್ತರದ ಪ್ರದೇಶಗಳನ್ನು ನೋಡಲು, ದೂರದ ಪ್ರದೇಶಗಳ ಕಡೆ ದೃಷ್ಟಿ ನೆಡಲು ಆತ ಹಿಂದಿನ ಕಾಲುಗಳ ಮೇಲೆ ಎದ್ದು ನಿಲ್ಲಲು ಶುರು ಮಾಡಿದನು. ಹಾಗೆ ಹಿಂದಿನ ಕಾಲುಗಳ ಮೇಲೆ ಪದೇ ಪದೇ ಎದ್ದು ನೋಡಬೇಕಾದ ಅವಶ್ಯಕತೆ ಬಂದಿದ್ದರಿಂದಾಗಿ ಯಾವಾಗಲೂ ಎರಡು ಕಾಲಿನ ಮೇಲೆಯೇ ನಿಲ್ಲುವುದನ್ನೇ ರೂಢಿ ಮಾಡಿಕೊಂಡನೆಂದು ಕೆಲವರ ಅಭಿಪ್ರಾಯ.

ಎರಡನೇ ಸಿದ್ಧಾಂತ;

ಮಾನವ ಆವತ್ತಿನ ಆಹಾರ ಆವತ್ತೇ ಸಂಪಾದಿಸಿಕೊಳ್ಳುವುದಲ್ಲದೇ ಮುಂಜಾಗ್ರತೆಗಾಗಿ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದನ್ನು ಕಲಿತುಕೊಂಡನು. ಜೊತೆಗೆ ಒಂದೆಡೆ ನೆಲೆ ನಿಲ್ಲುವ ಯೋಚನೆಯೂ ಬಂದಿತ್ತು. ಹೀಗಾಗಿ ಆಹಾರವನ್ನು ದೂರದ ಪ್ರದೇಶದಿಂದ ಹೊತ್ತು ತರುವುದನ್ನು ಕಲಿತುಕೊಂಡನು. ಅದಕ್ಕಾಗಿ ಮುಂದಿನ ಕಾಲುಗಳನ್ನು ಕೈಗಳ ರೂಪದಲ್ಲಿ ಉಪಯೋಗಿಸಿ ಆಹಾರವನ್ನು ಹಿಡಿದುಕೊಂಡು ಹಿಂದಿನ ಕಾಲುಗಳ ಮೇಲೆ ನಡೆಯುವುದನ್ನು ಕಲಿತುಕೊಂಡನು.

ಇದರಲ್ಲಿ ಯಾವ ವಾದ ಸರಿಯೋ ಗೊತ್ತಿಲ್ಲ. ಆದರೆ ಮನುಷ್ಯ ನಾಲ್ಕು ಕಾಲಿನ ಮೇಲಿನ ನಡಿಗೆಯಿಂದ ಎರಡು ಕಾಲಿನ ಮೇಲಿನ ನಡಿಗೆಗೆ ಬಂದ ಎಂಬುದಂತೂ ನಿಜ. ಅದರಿಂದ ಮನುಷ್ಯನ ಶರೀರದಲ್ಲಿ ಸಾಕಷ್ಟು ಬದಲಾವಣೆಗಳಾದವು.

ಮನುಷ್ಯನ ದೇಹದಲ್ಲಾದ ಬದಲಾವಣೆಗಳು

  •   ನಾಲ್ಕು ಕಾಲಿನ ಮೇಲೆ ನಡೆಯುವಾಗ ಭೂಮಿಗೆ ಸಮಾಂತರವಾಗಿದ್ದ ಬೆನ್ನು ಮೂಳೆ ಎರಡು ಕಾಲಿನ ಮೇಲೆ ನಡೆಯುವಾಗ ನೇರವಾಗಿ ನಿಲ್ಲುವಂತಾಯಿತು.
  • ದೇಹದ ತುಂಬಾ ಇದ್ದ ಕೂದಲುಗಳು ಕೆಲವು ಭಾಗ ಬಿಟ್ಟು ಉಳಿದೆಲ್ಲಾ ಕಡೆ ಉದುರಿ ಹೋಗಿ ದೇಹ ನುಣುಪಾಯಿತು.
  • ಮುಂದಿನ ಕಾಲುಗಳು ಕೈಗಳ ರೀತಿ ಬದಲಾದವು
  • ಚಪ್ಪಟೆಯಾಗಿದ್ದ ಮುಂದಿನ ಪಾದಗಳು ವಸ್ತುಗಳನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಅಂಗೈಗಳಾಗಿ ಬದಲಾದವು

Leave a Reply

Your email address will not be published. Required fields are marked *