ಕಿವಿ ಹಿಂಡುವ ಹವ್ಯಾಸವೂ, ಮೆದುಳಿನ‌ ಯೋಗವೂ..

Share This

ಕೆಲವರು ಮಕ್ಕಳು ಕಂಡರೆ ಸಾಕು ಅವರ ಕಿವಿ ಹಿಂಡುತ್ತಾರೆ. ಕೆಲವರು ಮಕ್ಕಳನ್ನು ಮಾತನಾಡಿಸುವುದೇ ಕಿವಿ ಹಿಂಡುವ ಮೂಲಕ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಇದನ್ನು ಅನುಸರಿಸುತ್ತಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡಾ ಮಕ್ಕಳನ್ನು ಕಂಡರೆ ಕಿವಿ ಹಿಂಡಿ ಮಾತನಾಡಿಸುತ್ತಾರೆ. ಇದನ್ನು ನಾವು ಭಾರತದಲ್ಲಿ ಶಿಕ್ಷೆ ಎಂದು ಭಾವಿಸಿದ್ದೇವೆ. ಮುಂದವರೆದ ದೇಶದಲ್ಲಿ ಇದೊಂದು ಯೋಗ. ವಿಜ್ಞಾನಿಗಳು ಕೂಡಾ ಕಿವಿ ಹಿಂಡೋ ಪದ್ಧತಿಯ ಬಗ್ಗೆ ವಿಶೇಷವಾದ ವಿಚಾರವೊಂದನ್ನು ಹೊರಗಡೆವಿದ್ದಾರೆ.

ಮಕ್ಕಳು ತಪ್ಪು ಮಾಡಿದರೆ ಅವರ ಕಿವಿ ಹಿಂಡಿ ಬುದ್ಧಿ ಹೇಳುವ ಪದ್ಧತಿ ಭಾರತದಲ್ಲಿ ಮೊದಲಿನಿಂದಲೂ ಇದೆ. ಇತರೆ ಕೆಲವು ದೇಶಗಳಲ್ಲೂ ಇದನ್ನು ಅನುಸರಿಸುತ್ತಾರೆ. ಅದರಲ್ಲೂ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಕಿವಿ ಹಿಂಡುವ ಮೂಲಕವೇ ಬುದ್ಧಿ ಹೇಳುವುದು. ಇದರ ಜೊತೆಗೆ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆಯುವ ಶಿಕ್ಷೆಯನ್ನೂ ನೀಡುತ್ತಾರೆ. ದೇವರ ಮುಂದೆಯೂ ಕೆಲವರು ಈ ರೀತಿ ಬಸ್ಕಿ ಹೊಡೆಯುತ್ತಾರೆ.

ಇದು ಶಿಕ್ಷೆಯ ವಿಧಾನವಾದರೂ ಇದರ ಹಿಂದೆ ವಿಜ್ಞಾನ ಇದೆ. ಈ ರೀತಿಯ ಶಿಕ್ಷೆ ಕಲಿಯುವವರಿಗೆ ಸಾಕಷ್ಟು ಅನುಕೂಲವಾಗುತ್ತದಂತೆ. ಇದು ಆರೋಗ್ಯಕ್ಕೂ ಒಳ್ಳೆಯದಂತೆ.  ವಿಜ್ಞಾನದ ಪ್ರಕಾರ ಕಿವಿ ಹಿಂಡುವುದರಿಂದ ಹಾಗೂ ಕಿವಿ ಹಿಂಡಿಸಿಕೊಳ್ಳುವುದರಿಂದ ಮಿದುಳು ಸಕ್ರಿಯವಾಗುತ್ತದಂತೆ. ಇದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗಿ ಕಲಿಕೆಗೆಗೂ ಉತ್ತೇಜನ ಸಿಗುತ್ತದಂತೆ.

 ಕಿವಿ ಹಿಂಡುವುದರಿಂದ ಏಕಾಗ್ರತೆ

ನಮ್ಮ ಮಗನಿಗೆ ಏಕಾಗ್ರತೆಯೇ ಇಲ್ಲ. ಓದಿದ್ದೆಲ್ಲಾ ಮರೆತುಬಿಡುತ್ತಾನೆ ಎಂದು ಕೆಲವರು ಹೇಳುತ್ತಿರುತ್ತಾರೆ. ಇದೇ ವಿಚಾರಕ್ಕಾಗಿ ಮಕ್ಕಳನ್ನು ಬೈಯ್ಯುತ್ತಿದ್ದಾರೆ. ಆದರೆ ಬೈಯ್ಯುವ ಬದಲು ಕಿವಿ ಹಿಂಡಿ ಬುದ್ಧಿ ಹೇಳಿದರೆ, ಈ ಸಮಸ್ಯೆ ನಿವಾರಣೆಯಾಗಿಬಿಡಬಹುದು. ಯಾಕೆಂದರೆ ಕಿವಿ ಹಿಂಡುವುದರಿಂದ ಮೆದುಳು ಸಕ್ರಿಯವಾಗಿ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದಂತೆ.

ಈ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳ ಪ್ರಕಾರ ಕಿವಿ ಹಿಂಡುವುದರಿಂದ ಮೆದುಳು ಅತ್ಯಂತ ಚುರುಕಾಗುತ್ತದಂತೆ. ಕಿವಿ ಹಿಂಡುವುದರಿಂದ ಮೆದುಳಿನ ಆಲ್ಪಾ ವೇವ್‌ ಗಳು ಆಕ್ಟಿವೇಟ್‌ ಆಗುತ್ತವೆ. ಇದೊಂದು ರೀತಿ ಮಸಾಜ್‌ ರೀತಿ. ಎಡ ಕಿವಿ ಹಿಂಡಿದರೆ ಬಲ ಮೆದುಳು ಸಕ್ರಿಯವಾಗುತ್ತದೆ. ಬಲ ಕಿವಿ ಹಿಂಡಿದರೆ ಎಡ ಮೆದುಳು ಸಕ್ರಿಯವಾಗುತ್ತದೆ.

ಕಿವಿ ಹಿಂಡುವುದು ಬ್ರೈನ್‌ ಯೋಗ

ತಜ್ಞರು ಹೇಳುವ ಪ್ರಕಾರ ಕಿವಿ ಹಿಂಡುವುದು ಮೆದುಳಿಗೆ ಒಂದು ರೀತಿಯ ಯೋಗವಿದ್ದಂತೆ. ಆಗಾಗ ಕಿವಿ ಹಿಂಡುತ್ತಿದ್ದರೆ ಪಿಟ್ಯುಟರಿ ಗ್ರಂಥಿಗಳು ಕೂಡಾ ಸಕ್ರಿಯವಾಗುತ್ತವಂತೆ. ಮೆದುಳನ್ನು ಎಚ್ಚರಿಸುವ ಈ ವಿಧಾನವನ್ನು ಹಲವಾರು ದೇಶಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಭಾರತದಲ್ಲಿ ಮಾತ್ರ ಇದನ್ನು ಶಿಕ್ಷೆ ಎಂದು ಕರೆಯುತ್ತಾರೆ. ಆದರೆ ಇತರೆ ದೇಶಗಳಲ್ಲಿ ಇದನ್ನು ಸೂಪರ್‌ ಬ್ರೈನ್‌ ಯೋಗಾ ಎಂದೇ ಕರೆಯುತ್ತಾರೆ.

ಅಮೆರಿಕದಲ್ಲಿ ನಡೆಯುತ್ತೆ ವರ್ಕ್‌ ಶಾಪ್‌

ಕಿವಿ ಹಿಂಡುವುದನ್ನು ಅಮೆರಿಕ ಸೇರಿ ಹಲವು ಮುಂದುವರೆದ ದೇಶಗಳಲ್ಲಿ ಯೋಗಾದ ಒಂದು ವಿಧಾನ ಎಂದೇ ಪರಿಗಣಿಸಿದ್ದಾರೆ. ಮೆದುಳನ್ನು ಚುರುಕುಗೊಳಿಸಲು ಕಿವಿ ಹಿಂಡುವ ವಿಧಾನವನ್ನು ಬಳಸುತ್ತಿರುತ್ತಾರೆ. ಕಿವಿ ಹಿಡಿದು ಬಸ್ಕಿ ಹೊಡೆಯುತ್ತಿರುತ್ತಾರೆ. ಇನ್ನು ಅಮೆರಿಕದಲ್ಲಿ ಕಿವಿ ಹಿಂಡುವ ವರ್ಕ್‌ ಶಾಪ್‌ ಗಳು ಕೂಡಾ ನಡೆಯುತ್ತಿರುತ್ತವೆ.

 ಕಿವಿ ಚುಚ್ಚುವುದು ಕೂಡಾ ಇದೇ ಕಾರಣಕ್ಕೆ

ಭಾರತದಲ್ಲಿ ಕಿವಿ ಚುಚ್ಚುವ ಪದ್ಧತಿ ಕೂಡಾ ಇದೆ. ಇದು ಕೂಡಾ ಮೆದುಳನ್ನು ಚುರುಕುಗೊಳಿಸುವ ಪ್ರಕ್ರಿಯೆ ಎಂದು ತಜ್ಞರು ಹೇಳುತ್ತಾರೆ. ಭಾರತದಲ್ಲಿ ಅನುಸರಿಲಾಗುತ್ತಿರುವ ಹಲವಾರು ಪದ್ಧತಿಗಳು ವಿಜ್ಞಾನಕ್ಕೆ ತಳಕು ಹಾಕಿಕೊಳ್ಳುತ್ತವೆ. ಈ ಕಿವಿ ಹಿಂಡುವ ಪದ್ಧತಿಯೂ ಕೂಡಾ ವೈಜ್ಞಾನಿಕವಾಗಿ ಒಳ್ಳೆಯದು ಎಂದು ಸಾಬೀತಾಗಿದೆ.

 

Leave a Reply

Your email address will not be published. Required fields are marked *